ತೆಂಗಿನಕಾಯಿ ಚಟ್ನಿ ತೆಂಗಿನಕಾಯಿ ಚಟ್ನಿ ಬಹುತೇಕ ಎಲ್ಲಾ ತಿಂಡಿಗಳೊಂದಿಗೆ ತಿನ್ನಬಹುದಾದ ಡಿಪ್. ದೋಸೆ, ಇಡ್ಲಿ, ರೊಟ್ಟಿ, ಪೂರಿ, ಚಪಾತಿ, ಅನ್ನ, ಪುಲಾವ್, ಬಜ್ಜಿ, ಚಿತ್ರಾನ್ನ ಹೀಗೆ ಯಾವುದರೊಂದಿಗೆ ಕೂಡಾ ತಿನ್ನಬಹುದು. ಇಲ್ಲಿ ನಿಮಗೆ ನಾವು ಬೆಳ್ಳುಳ್ಳಿ ಬಳಸದೆ ಹೇಗೆ ಹೋಟೆಲ್ ಶೈಲಿಯಂತೆ ರುಚಿಯಾದ ತೆಂಗಿನಕಾಯಿ ಚಟ್ನಿ ಮಾಡುವುದು ಎಂಬುದನ್ನು ಹೇಳಿಕೊಡುತ್ತೇವೆ. ಬೇಕಾಗುವ ಸಾಮಗ್ರಿಗಳು • ತೆಂಗಿನತುರಿ – 1ಕಪ್ • ಹಸಿಮೆಣಸಿನಕಾಯಿ – 10 • ಹುರಿಗಡಲೆ – 2 tbsp • ಶುಂಠಿ – ½ ಇಂಚು • ಹುಣಿಸೆಹಣ್ಣು – ನೆಲ್ಲಿಕಾಯಿ ಗಾತ್ರದ್ದು • ಕೊತ್ತಂಬರಿ ಸೊಪ್ಪು – 5 ಎಸಳು • ಎಣ್ಣೆ – 1 tsp • ಉಪ್ಪು – ರುಚಿಗೆ ತಕ್ಕಷ್ಟು ಒಗ್ಗರಣೆಗೆ • ಎಣ್ಣೆ -1 tsp • ಸಾಸಿವೆ – ½ tsp • ಕಡ್ಲೆಬೇಳೆ – 1 tsp • ಉದ್ದಿನ ಬೇಳೆ-1 tsp • ಕರಿಬೇವು – 1 ಎಸಳು • ಒಣಮೆಣಸಿನಕಾಯಿ – 1 ತಯಾರಿಸುವ ವಿಧಾನ 1. ಹಸಿಮೆಣಸಿನಕಾಯನ್ನು ಮಧ್ಯಕ್ಕೆ ಸೀಳಿ ಬಾಣಲೆಗೆ ಸೇರಿಸಿ, ಅದರೊಂದಿಗೆ ಎಣ್ಣೆ ಸೇರಿಸಿ ಕಡಿಮೆ ಉರಿಯಲ್ಲಿ 1 ನಿಮಿಷ ಹುರಿದುಕೊಳ್ಳಿ 2. ಒಂದು ಜಾರ್ಗೆ ತೆಂಗಿನಕಾಯಿ ತುರಿ, ಹುರಿಗಡಲೆ, ಶುಂಠಿ, ತೊಳೆದ ಹುಣಿಸೆಹಣ್ಣು, ಕೊತ್ತಂಬರಿ ಸೊಪ್ಪು, ಉಪ್ಪು, ಹುರಿದ ಹಸಿಮೆಣಸಿನಕಾಯಿ ಸ್ವಲ್ಪ ನೀರು ಸೇರಿಸಿ ರುಬ್ಬಿಕೊಂಡು ಬೌಲ್ಗೆ ವರ್ಗಾಯಿಸಿ 3. ಒಗ್ಗರಣೆ ಬಾಣಲಿಯಲ್ಲಿ ಸ್ವಲ್ಪ ಎಣ್ಣೆ ಬಿಸಿ ಮಾಡಿಕೊಂಡು ಸಾಸಿವೆ, ಕಡ್ಲೆಬೇಳೆ, ಉದ್ದಿನಬೇಳೆ, ಕರಿಬೇವು, ಒಣಮೆಣಸಿನಕಾಯಿ ಸೇರಿಸಿ 30 ಸೆಕೆಂಡ್ಗಳ ಕಾಲ ಕಡಿಮೆ ಉರಿಯಲ್ಲಿ ಫ್ರೈ ಮಾಡಿ 4. ಈ ಒಗ್ಗರಣೆಯನ್ನು ಚಟ್ನಿ ಮೇಲೆ ಸುರಿದು ಮಿಕ್ಸ್ ಮಾಡಿದರೆ ರುಚಿಯಾದ, ಹೋಟೆಲ್ ಶೈಲಿಯ ತೆಂಗಿನಕಾಯಿ ಚಟ್ನಿ ತಿನ್ನಲು ರೆಡಿ ಸೂಚನೆ: • ಹಸಿಮೆಣಸಿನಕಾಯನ್ನು ಮಧ್ಯಕ್ಕೆ ಸೀಳಿ ಹುರಿಯುವುದರಿಂದ ಅದು ಸಿಡಿಯುವುದಿಲ್ಲ, ಅಷ್ಟೇ ಅಲ್ಲ ಅದನ್ನು ಹುರಿಯುವುದರಿಂದ ರುಚಿಯೂ ಹೆಚ್ಚಾಗುತ್ತದೆ • ಚಟ್ನಿಯನ್ನು ದಪ್ಪವಾಗಿ ಅಥವಾ ನುಣ್ಣಗೆ ರುಬ್ಬಿಕೊಳ್ಳದೆ ಮಧ್ಯಮ ಪ್ರಮಾಣದಲ್ಲಿ ಗ್ರೈಂಡ್ ಮಾಡಿಕೊಂಡರೆ ಅದು ತಿನ್ನಲು ರುಚಿಯಾಗಿರುತ್ತದೆ Coconut Chutney We can eat Chutney with Dosa, Idly, Chapati, Roti, Rice, Pulao, lemon rice or Bajji. It will enhance the taste of any dish. Here we are going to show how to make hotel style chutney without using garlic. Ingredients • Grated Coconut – 1 cup • Green chillies – 10 • Fried split gram – 2 tbsp • Ginger – ½ inch • Tamarind – gooseberry size • Coriander leaves – 5 stems • Oil – 1 tsp • Salt – as per taste For tempering • Oil – 1 tsp • Mustard -1/2 tsp • Bengal gram – 1 tsp • Urad dal – 1 tsp • Curry leaves – 1 stem • Dry chilli – 1 Preparation method 1. Split green chilli and add to Kadai, add little bit oil and fry the chillies for 1 minute on low flame 2. Add grated coconut, fried split gram, ginger, washed tamarind, coriander leaves, salt, fried green chilli to jar and grind with little bit water 3. Transfer this chutney in bowl 4. Heat an oil in small kadai, add mustard, Bengal gram, Urad dal, curry leaves, red chilli and roast for 30 seconds on low flame 5. Add this tempering to chutney and mix well 6. Tasty, hotel style Chutney is ready to eat Note: • Don't forget to Split the green chillies to avoid pop, while roasting it. Also roasted chilli will enhance the taste of chutney • Don’t grind chutney as thin or thick paste. If it is in medium consistency then taste will be good My Equipments for Audio And Video : VIDEO CAMERA Panasonic https://amzn.to/3vWkMEq Sony https://amzn.to/34QJRVy GoPro https://amzn.to/3fSWKEV --------------------------------------------- MIC AND AUDIO BOYA by-MM1 https://amzn.to/3z4dMYd Zoom H1n https://amzn.to/3poHd2K BOYA BO-YA BY-M1 https://amzn.to/2RnqbW2 Solo Studio (3rd Gen) https://amzn.to/3fSZlOW ---------------------------------------------------------------- TRIPOD https://amzn.to/3wV5f87 Tripod Video Head https://amzn.to/3uUnlFU ------------------------------------------------------ LIGHT FOR VIDEO HARISON https://amzn.to/3z26aFv Godox SL60 60W https://amzn.to/2TKQTc8 #BhagyaTvRecipes #bhagyaTV #BhagyaTvKannada Bhagya tv vlogs channel : / @bhagyatvvlogs BHAGYA TV https://www.youtube.com/c/bhagyatv?su... #BhagyaTvRecipes #bhagyaTV #BhagyaTvKannada Bhagya tv vlogs channel : / @bhagyatvvlogs BHAGYA TV https://www.youtube.com/c/bhagyatv?su...