ಮಾತಿಗೆ ನಿಲುಕದ ಮಾತುಗಳೊಡೆಯನು | Maathige Nilukada | Song on Sri Ramakrishna | Sung by Vishwanath, SGK

ಮಾತಿಗೆ ನಿಲುಕದ ಮಾತುಗಳೊಡೆಯನು | Maathige Nilukada | Song on Sri Ramakrishna | Sung by Vishwanath, SGK

ಶ್ರೀರಾಮಕೃಷ್ಣ ಪರಮಹಂಸರ ಅಲೌಕಿಕ ವ್ಯಕ್ತಿತ್ವದ, ಹಾಗೂ ಮರುಳುಗೊಳಿಸುವ ಅವರ ವಾಗ್ಧಾರೆಯ ಚಿತ್ರಣ ನೀಡುವ ಕವನ. ಗೀತರಚನೆ, ರಾಗ ಸಂಯೋಜನೆ: ಡಾ| ಹೆಚ್.ಎನ್.‌ ಮುರಳೀಧರ ಗಾನಪ್ರಸ್ತುತಿ: ಶ್ರೀ ಹೆಚ್.ವಿ. ವಿಶ್ವನಾಥ್‌, ಶಿಕ್ಷಕರು, ಶಾರದಾ ಗುರುಕುಲ, ಬೆಂಗಳೂರು ರಾಗ: ಝಿಂಝೋಟಿ, ತ್ರಿತಾಲ ಮಾತಿಗೆ ನಿಲುಕದ ಮಾತುಗಳೊಡೆಯನು ಮಾತನಾಡುತಿಹನು| ಮಾತಿನಲ್ಲೆ ಮಾತೆಲ್ಲವನಡಗಿಸಿ ಮಾತನೆ ಮೀರಿಹನು|| ಕೊಳಲು-ಕೊರಳಿನಿಂ ತುಂಬಿ ಬಂದ ದನಿ ಹರಡಿ ಹಬ್ಬುತಿರಲು| ತನನತಾನದಲಿ ಮಧುರಗಾನದಲಿ ಜಗವದೆಲ್ಲ ಮರುಳು|| ಭೋರ್‌ ಭೋರನೆ ತಾ ಸುರಿಯುತಲಿದ್ದರು ತುಂಬಿ ಸುರಿವುದಲ್ಲ| ಹನಿಗು ಹನಿಗು ಬಹು ಲೆಕ್ಕವಿಹುದಿಲ್ಲಿ ಬೇರೆ ಮಾತೆ ಇಲ್ಲ|| A Kannada poetic composition describing the bewitching effect that the talks of Sri Ramakrishna Paramahamsa had on his audiences. Composed and tuned by Dr. H N Muralidhara. Sung by Sri HV Vishwanath, Mentor, Sharada Gurukula, Bangalore. Dedicated to the memory of HH Swami Purushottamanandaji of Ramakrishna Order, the eternal inspiration for Sharada Gurukula.