Ridge Gourd Tovve / ಹೆಸರುಬೇಳೆ ಹೀರೆಕಾಯಿ ತೊವ್ವೆ/ಆರೋಗ್ಯಕರವಾದ ತೊವ್ವೆ

Ridge Gourd Tovve / ಹೆಸರುಬೇಳೆ ಹೀರೆಕಾಯಿ ತೊವ್ವೆ/ಆರೋಗ್ಯಕರವಾದ ತೊವ್ವೆ

Here I have showed how to prepare delicious Ridge Gourd Tovve in a quick and easy method. This recipe can also be prepared using snake gourd, chayote or without any vegetables. Serve this delicious recipes with rice and ghee. ಹೆಸರುಬೇಳೆಯೊಂದಿಗೆ ಹೀರೆಕಾಯಿಯನ್ನು ಹಾಕಿ ಸುಲಭವಾದ ವಿಧಾನದಲ್ಲಿ ತೊವ್ವೆಯನ್ನು ಹೇಗೆ ತಯಾರಿಸಿ ಸವಿಯಬಹುದೆಂದು ಇಲ್ಲಿ ತಿಳಿಸಲಾಗಿದೆ.ಹೀರೆಕಾಯಿ ಅಲ್ಲದೇ ಪಡುವಲಕಾಯಿ,ಸೀಮೆಬದನೆಕಾಯಿಯನ್ನು ಉಪಯೋಗಿಸಿ ಇದೇ ರೀತಿಯಲ್ಲಿ ತೊವ್ವೆ ತಯಾರಿಸಬಹುದು.ತರಕಾರಿ ಇಷ್ಟ ಇಲ್ಲದವರು ಬರೀ ಬೇಳೆಯನ್ನು ಉಪಯೋಗಿಸಿ ತೊವ್ವೆ ತಯಾರಿಸಿಕೊಳ್ಳಬಹುದು. 1 ಕಪ್ ಹೆಸರುಬೇಳೆ(200 ಗ್ರಾಂ)ಯನ್ನು ತೆಗೆದುಕೊಳ್ಳಿ. ಹೆಸರುಬೇಳೆಗೆ ನೀರನ್ನು ಹಾಕಿ. ಚನ್ನಾಗಿ ತೊಳೆದುಕೊಳ್ಳಿ. ನೀರನ್ನು ಸೋಸಿಕೊಳ್ಳಿ. ತೊಳೆದ ಹೆಸರುಬೇಳೆಯನ್ನು ಪಾತ್ರೆಗೆ ಹಾಕಿ. 1/4 ಕಿಲೋ ಹೀರೆಕಾಯಿಯನ್ನು 1 ಇಂಚಿಗೆ ಕತ್ತರಿಸಿಕೊಳ್ಳಿ. ಹೀರೆಕಾಯಿಯನ್ನು ಹೆಸರುಬೇಳೆ ಜೊತೆಗೆ ಹಾಕಿ. 4 ಕಪ್ (1ಲೀಟರ್) ನೀರನ್ನು ಹಾಕಿ. 1/2 ಟೀ ಚಮಚ ಅರಶಿನಪುಡಿಯನ್ನು ಹಾಕಿ. 2 ಹಸಿಮೆಣಸನ್ನು ಕತ್ತರಿಸಿ ಹಾಕಿ. 10 ಕರಿಬೇವು ಎಲೆಯನ್ನು ಹಾಕಿ. ಮಿಶ್ರಣ ಮಾಡಿ. ಮುಚ್ಚಳವನ್ನು ಮುಚ್ಚಿ. ಕುದಿ ಬರಲಿ. ಮುಚ್ಚಳವನ್ನು ತೆಗೆಯಿರಿ. ಮಿಶ್ರಣ ಮಾಡಿ. 10 ನಿಮಿಷ ಮಧ್ಯಮ ಉರಿಯಲ್ಲಿ ಮೆತ್ತಗೆ ಬೇಯಿಸಿ. 2 ಕಪ್ (1/2 ಲೀಟರ್)ನೀರನ್ನು ಹಾಕಿ. ನೀರು ನಿಮಗೆ ಎಷ್ಟು ತಳ್ಳಗೆ ಬೇಕು ಅಷ್ಟು ಹಾಕಿಕೊಳ್ಳಿ. ಮಿಶ್ರಣ ಮಾಡಿ. ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ. ಮಿಶ್ರಣ ಮಾಡಿ. 1 ಟೇಬಲ್ ಚಮಚ ಬೆಲ್ಲ ಹಾಕಿ. ಮಿಶ್ರಣ ಮಾಡಿ. 5 ನಿಮಿಷ ಕುದಿಸಿ. 2 ಟೇಬಲ್ ಚಮಚ ತೆಂಗಿನ ತುರಿ ಹಾಕಿ. ಮಿಶ್ರಣ ಮಾಡಿ. 2 ಟೇಬಲ್ ಚಮಚ ಕೊತ್ತಂಬರಿ ಸೊಪ್ಪನ್ನು ಹಾಕಿ. ಮಿಶ್ರಣ ಮಾಡಿ. 1 ನಿಂಬೆಹಣ್ಣಿನ ರಸವನ್ನು ಹಾಕಿ. ಮಿಶ್ರಣ ಮಾಡಿ. ಬಾಣಲೆಗೆ 2 ಟೇಬಲ್ ಚಮಚ ತುಪ್ಪವನ್ನು ಹಾಕಿ ಬಿಸಿ ಮಾಡಿಕೊಳ್ಳಿ. 1 ಟೀ ಚಮಚ ಸಾಸಿವೆ ಹಾಕಿ. 1 ಟೀ ಚಮಚ ಜೀರಿಗೆ ಹಾಕಿ. ಮಿಶ್ರಣ ಮಾಡಿ. ಸಾಸಿವೆ ಸಿಡಿಯಲಿ. 1/4 ಟೀ ಚಮಚ ಇಂಗು ಹಾಕಿ. 6 ಬಾಳಕ ಮೆಣಸಿನಕಾಯಿ(ಮಜ್ಜಿಗೆ ಮೆಣಸಿನಕಾಯಿ) ಹಾಕಿ. ಬಾಳಕದ ಮೆಣಸಿನಕಾಯಿ ಇಲ್ಲದಿದ್ದರೆ 2 ಒಣಮೆಣಸಿನಕಾಯಿ ತುಂಡು ಮಾಡಿ ಹಾಕಿ. ಗರಿ ಗರಿಯಾದ ನಂತರ ಒಲೆಯನ್ನು ಆರಿಸಿ. ತಯಾರಿಸಿದ ಒಗ್ಗರಣೆಯನ್ನು ತೊವ್ವೆಗೆ ಹಾಕಿ. ಮಿಶ್ರಣ ಮಾಡಿ. ಒಲೆಯನ್ನು ಆರಿಸಿ 2 ನಿಮಿಷ ಮುಚ್ಚಿಡಿ. ಮುಚ್ಚಿಟ್ಟರೆ ಪರಿಮಳ ಹಾಗೇ ಇರುತ್ತದೆ. ರುಚಿಕರವಾದ ಮತ್ತು ಆರೋಗ್ಯಕರವಾದ ತೊವ್ವೆಯನ್ನು ಅನ್ನಕ್ಕೆ ಹಾಕಿ ತುಪ್ಪದೊಂದಿಗೆ ಸವಿಯಿರಿ. #MANEADUGEWITHVEDA #ridgegourdtovverecipe For more recipes visit my website- https://maneadigewithveda.wordpress.com/ Facebook-   / maneadugewithveda