Sunil Kumar Strict Warning : ಶಾಂತಿಗೆ ಸಹಕರಿಸಿ ಇಲ್ಲವೇ, ಬುಲ್ಡೋಜರ್‌ಗೆ ಸಹಕರಿಸಿ! | Vijay Karnataka

Sunil Kumar Strict Warning : ಶಾಂತಿಗೆ ಸಹಕರಿಸಿ ಇಲ್ಲವೇ, ಬುಲ್ಡೋಜರ್‌ಗೆ ಸಹಕರಿಸಿ! | Vijay Karnataka

ಶಾಂತಿಗೆ ಸಹಕರಿಸಿ ಇಲ್ಲವೇ, ಬುಲ್ಡೋಜರ್‌ಗೆ ಸಹಕರಿಸಿ ಎನ್ನುವ ಮೂಲಕ ಇಂಧನ ಸಚಿವ ಸುನೀಲ್‌ ಕುಮಾರ್‌ ರಾಜ್ಯದಲ್ಲಿ ಅಶಾಂತಿ ಸೃಷ್ಟಿಸುವವರಿಗೆ ಖಡಕ್‌ ವಾರ್ನಿಂಗ್‌ ನೀಡಿದ್ದಾರೆ. ಬಾಗಲಕೋಟೆಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರ ಅವಧಿಯಲ್ಲಿ ಪಿಎಫ್‌ಐ ಸಂಘಟನೆಯ ಒಂದೂವರೆ ಸಾವಿರ ಜನರ ಕೇಸ್ ಹಿಂಪಡೆಯಲಾಯಿತು. ಅಂದು ಬಿತ್ತಿದ ವಿಷ ಬೀಜ ಇಂದು ಹೆಮ್ಮರವಾಗಿ ನಿಂತಿದೆ ಎಂದು ಹೇಳಿದರು. ಹುಬ್ಬಳ್ಳಿ ಘಟನೆಯನ್ನು ನಮ್ಮ ಅಧಿಕಾರಿಗಳು 24 ಗಂಟೆಯಲ್ಲಿ ಹದ್ದುಬಸ್ತಿಗೆ ತಂದಿದ್ದಾರೆ. ಇಂತಹ ಕಾನೂನು ಬಾಹಿರ ಚಟುವಟಿಕೆ ತಡೆದುಕೊಳ್ಳುವಂತಹ ಪ್ರಶ್ನೆಯೇ ಸರ್ಕಾರಕ್ಕೆ ಇಲ್ಲವೇ ಇಲ್ಲ. ಯಾವುದನ್ನು ಸಹಿಸುವುದಿಲ್ಲ. ಅಲ್ಪಮತೀಯ ಕಾರ್ಯಕರ್ತರಿಗೆ, ಮಂಗಳೂರಿನ ಘಟನೆಗಳು, ಬೆಂಗಳೂರಿನ ಘಟನೆಗಳನ್ನು, ಯಾರೋ ಕೆಲವರು ಉದ್ದೇಶ ಪೂರ್ವಕವಾಗಿ ಅಶಾಂತಿ ಉಂಟು ಮಾಡುವ ಕೆಲಸ ಮಾಡುತ್ತಿದ್ದಾರೆ. ಅದಕ್ಕೆ ನಾನು ಎಚ್ಚರಿಕೆ ಕೊಡೋದು ಏನೆಂದರೆ,ಈ ಸಕಾ೯ರವೇನು ಕೈಕಟ್ಟಿ ಕೂರೋದಿಲ್ಲ ಎಂದರು. #HubbaliRiots #Bagalkot #SunilKumar Our Website : https://Vijaykarnataka.com Facebook:   / vijaykarnataka   Twitter:   / vijaykarnataka