MUST Listen Goddess Venapaani Saraswati (Sharadadevi) Keerthane. Originally written by " Dasa Shrestha" Purandara dasaru abridged version. Request to listen, subscribe and forward to friends. Lyrics ನಲಿದಾಡೇ ಎನ್ನ ನಾಲಗೆ ಮ್ಯಾಲೆ | ಶಾರದಾದೇವಿ || ಕುಣಿದಾಡೆ ಎನ್ನ ನಾಲಗೆ ಮ್ಯಾಲೆ | ನಾಲಿಗೆ ಮ್ಯಾಲೆ ||| ಘಿಲು ಘಿಲು ಘಿಲು ಗೆಜ್ಜೆಯ ನಾದ | ಹೊಳೆವ ಅಂದುಗೆ ರುಳಿ ಪೈಂಜಣವಿಟ್ಟ ಪುಟ್ಟ ಪಾದ | ಸುರವರನುತ ಪಾದ ಸರಸಿಜೋದ್ಭವನ ವದನ ನಿಲಯಳೆ| ಕರುಣದಿಂದ ಪರಿಪಾಲಿಸು ಮಾತೆ ||೧|| ನಸುನಗೆ ಮುಖವು ನಾಸಾಭರಣ | ಎಸೆವ ಕಪೋಲ ಹೊಸ ಮುತ್ತಿನ ಚಳ ತುಂಬಿಟ್ಟ ಶ್ರವಣ | ತಿಲಕವು ಹಸನ ಶಶಿ ಸೂರ್ಯರ ಆಭರಣ ಶೋಭಿತಳೆ | ಕುಸುಮ ಮುಡಿದ ಮೂರ್ಧ್ವಜವುಳ್ಳವಳೆ ||೨|| ಶೃಂಗಾರವಾದ ಜಡೆ ಬಂಗಾರ | ರಾಗುಟಿ ಶೌರಿ ಹೊಂಗ್ಯಾದಿಗೆ ಗೊಂಡೆ ಮುತ್ತಿನ ಹಾರ ರಂಗು ಮನೋಹರ | ಮಂದಗಮನೆ ಅರವಿಂದ ನಯನ ಸಿರಿ | ರಂಗ ವಿಟ್ಟಲನ ತೋರೇ ಶುಭಾಂಗಿ ||೩|| 🙏🙏🙏💐🙏🙏🙏