ನಿರಂಜನ ಹರಿಚಿದ್ಘನ ಮೂರುತಿಯನು ನೆನೆಯೊ Nirajana harichidghana

ನಿರಂಜನ ಹರಿಚಿದ್ಘನ ಮೂರುತಿಯನು ನೆನೆಯೊ Nirajana harichidghana

By Vishwanath, Mentor, Sharada Gurukula ನಿರಂಜನ ಹರಿಚಿದ್ಘನ ಮೂರುತಿಯನು ನೆನೆಯೊ ನಿರಂತರ-ಮೋಹನಮೂರುತಿಯನು ನೆನೆಯೊ|| ಅನುಪಮತೇಜನ ಸುಂದರರೂಪನ ಭಕ್ತರ ಎದೆಯಲಿ ರಂಜಿಪನ| ಕೋಟಿಚಂದ್ರಸಮ ಕಾಂತಿಯ ನಾಚಿಸಿ ಮಿಂಚಿನಂತೆ ನಮ್ಮ ಎದೆಯೊಳು ರಂಜಿಸಿ ಮೋಹಿಪನ|| ಹೃದಯಪದ್ಮದಲಿ ಪೂಜಿಸು ಆತನ ಶಾಂತಮಾನಸದಿ ಜ್ಞಾನನಯನದಲಿ ಅಪೂರ್ವದರ್ಶನ ಮೋಹನನ| ಭಕ್ತಿಯೋಗದ ಆವೇಶದಿ ಮುಳುಗಿಪ ಚಿದಾನಂದರಸ ಸಾಗರನ|| -ವಚನವೇದ