ನೀ ಕರುಣಿಸೋ ವಿಠ್ಠಲ - ಶ್ರೀ ಪ್ರಸನ್ನ ವೆಂಕಟ ದಾಸರು ವಿಠ್ಠಲ ಪಂಢರಿ ವಿಠ್ಠಲ ನೀ ಕರುಣಿಸೋ ವಿಠ್ಠಲ ನಮ್ಮ ಸಾಕು ಪಂಢರಿ ವಿಠ್ಠಲ ವಿಠ್ಠಲ ಪಂಢರಿ ವಿಠ್ಠಲ ದೋಷಿಗಳೊಳಗೆ ಹಿರಿಯನು ನಾನು ನಿರ್ದೋಷಿಗಳರಸೆ ವಿಠ್ಠಲ | ಸಾಸಿವೆಯಷ್ಟು ಭಕುತಿಯನರಿಯೆನು ಶೇಷಶಯನ ಶ್ರೀ ವಿಠ್ಠಲ || ಭವಸಾಗರದಲಿ ಮುಳುಗುವೆ ಸುಮ್ಮನೆ ಅವಲೋಕಿಸುವರೆ ವಿಠ್ಠಲ | ನವನವ ವಿಷಯಕೆ ಹಿಗ್ಗುತಲಿ ಹಾ ಮನದವಸರ ಕಾಯೋ ವಿಠ್ಠಲ || ಝಾವಕೆ ಮಾಡುವೆ ಸಾವಿರ ತಪ್ಪನು ಕಾಯೋ ದಾಯಾಂಬುದೆ ವಿಠ್ಠಲ | ಶ್ರೀವರಪ್ರಸನ್ನ ವೆಂಕಟ ವಿಠ್ಠಲ ಜೀವಕೆ ಹೊಣೆ ನೀ ವಿಠ್ಠಲ ||