https://madhwaprameyamahodadhi.blogsp... ಎನ್ನ ಬಿಟ್ಟು ನೀನು ಅಗಲದಿರೊ ಶ್ರೀನಿವಾಸ ||ಪ|| ನಿನ್ನ ನಂಬಿದ ದಾಸನಲ್ಲವೇನೋ ||ಅ|| ತನುವೆಂಬೊ ಮಂಟಪದಿ ಮನವೆಂಬೊ ಹಸೆ ಮಂಚ , ಘನವಾದ ಸುಜ್ಞಾನ ದೀಪದ ಬೆಳಕಲ್ಲಿ, ಸನಕಾದಿ ವಂದ್ಯ ನೀ ಬೇಗ ಬಾರೋ |೧| ಪಂಚರಿವರು ಯಾವಾಗಲೂ, ಹೊಂಚ್ಹಾಕಿ ನೋಡುತಾರೆ ಕೊಂಚಗಾರರು ಆರು ಮಂದಿ ಅವರು, ಹಿಂಚು ಮುಂಚಿಲ್ಲದೆ ಎಳೆಯುತಾರೆ |೨| ಮುನ್ನ ಮಾಡಿದ ದುಷ್ಕರ್ಮದಿ ಬಳಲಿದೆ, ಇನ್ನಾದರು ನೀ ಎನ್ನ ಕಾಯೊ ಘನ್ನ ಮಹಿಮ ಶ್ರೀ ಪುರಂದರವಿಠಲ, ಮನ್ನಿಸಿ ಮಮತೆ ಎನ್ನಲ್ಲಿ ತೋರೊ |೩| एन्न बिट्टु नीनु अगलदिरो श्रीनिवास ॥प॥ निन्न नंबिद दासनल्लवॆनॊ ॥अ॥ तनुवेंबो मंटपदि मनवेंबो हसे मंच , घनवाद सुज्ञान दीपद बेळकल्लि, सनकादि वंद्य नी बॆग बारॊ ।१। पंचरिवरु यावागलू, होंच्हाकि नॊडुतारे कोंचगाररु आरु मंदि अवरु, हिंचु मुंचिल्लदे एळेयुतारे ।२। मुन्न माडिद दुष्कर्मदि बळलिदे, इन्नादरु नी एन्न कायो घन्न महिम श्री पुरंदरविठल, मन्निसि ममते एन्नल्लि तॊरो ।३। enna biTTu nInu agaladiro SrInivAsa ||pa|| ninna naMbida dAsanallavEnO ||a|| tanuveMbo maMTapadi manaveMbo hase maMca , GanavAda suj~jAna dIpada beLakalli, sanakAdi vaMdya nI bEga bArO |1| paMcarivaru yAvAgalU, hoMc~hAki nODutAre koMcagAraru Aru maMdi avaru, hiMcu muMcillade eLeyutAre |2| munna mADida duShkarmadi baLalide, innAdaru nI enna kAyo Ganna mahima SrI puraMdaraviThala, mannisi mamate ennalli tOro |3|