ನಮ್ಮ ಭಾರತ ದೇಶದಲ್ಲಿ ಹಬ್ಬಗಳಿಗೆಂದೇ ವಿಶೇಷ ಸ್ಥಾನವಿದೆ. ಯುಗಾದಿ, ದೀಪಾವಳಿ, ಹೋಳಿ ಹಬ್ಬ, ಸಂಕ್ರಾಂತಿ, ಗೌರಿ ಗಣೇಶ ಹೀಗೆ ಒಂದೊಂದು ಹಬ್ಬಕ್ಕೂ ಅದರದೆ ಆದ ಹಿನ್ನೆಲೆಯುಂಟು, ಸಂಪ್ರದಾಯಗಳುಂಟು, ವೈಶಿಷ್ಟ್ಯಗಳುಂಟು. ಸಂಕ್ರಾಂತಿಗೆ ಸಂಬಂಧಪಟ್ಟ ಆಚರಣೆಗಳಲ್ಲಿ ಮುಖ್ಯವಾಗಿ ಕಂಡುಬರುವುದು ಎಳ್ಳು-ಬೆಲ್ಲ. ಮನೆಯಲ್ಲಿ ಎಳ್ಳು-ಬೆಲ್ಲವನ್ನು ತಯಾರಿಸಿ ಆಪ್ತರ ಮನೆಗಳಿಗೆ ಎಳ್ಳು ಬೀರುವುದು ಮತ್ತು ಸ್ನೇಹಿತರು ಸಂಬಂಧಿಕರೊಂದಿಗೆ ಶುಭಾಶಯಗಳನ್ನು ಹಂಚಿಕೊಳ್ಳುವುದು, ಹೊಸ ಬಟ್ಟೆಗಳನ್ನು ಧರಿಸಿ, ಕುಟುಂಬಸ್ಥರೊಂದಿಗೆ ಸಿಹಿ ಊಟ ಸೇವಿಸುವುದು. ಎಳ್ಳಿನ ಜೊತೆಗೆ ಸಕ್ಕರೆ ಅಚ್ಚುಗಳು, ಹಣ್ಣು ಮತ್ತು ಕಬ್ಬನ್ನು ಸಹ ಬೀರುವ ಸಂಪ್ರದಾಯವಿದೆ. #ಸಂಕ್ರಾಂತಿ #ಮಕರಸಂಕ್ರಾಂತಿ #sankranti #makarasankranti #makarsankranti